Connect with us

ಲೋಕಲ್ ನ್ಯೂಸ್

ಬಹು ಭಾಷಾ ಸಾಹಿತಿ ಹಫ್ಸಾ ಬಾನು ಬೆಂಗಳೂರು ಇವರ ‘ಹೃದಯದ ಮಾತುಗಳು’ ಅತ್ಯುತ್ತಮ ಲೇಖನವೆಂದು ಆಯ್ಕೆ ಮಾಡಿದ ಆಯ್ರಾ ಸೋಶಿಯಲ್

Published

on

ಬೆಂಗಳೂರಿನ ಆಯ್ರಾ ಸೋಶಿಯಲ್ (www.ayra.social) ವೆಬ್‌ಸೈಟ್’ನ ವತಿಯಿಂದ ಲೇಖನ ಸ್ಪರ್ಧೆಯೊಂದನ್ನು ಏರ್ಪಡಿಸಲಾಗಿದ್ದು. ಕನ್ನಡ ಹಿಂದಿ ಇಂಗ್ಲಿಷ್ ಮೂರು ಭಾಷೆಗಳ ಲೇಖನಗಳನ್ನು ಆಹ್ವಾನಿಸಿತು. ಉತ್ತಮವೆನಿಸಿದ ನಲ್ವತ್ತು ಲೇಖನಗಳನ್ನು ಸ್ಪರ್ಧೆಗೆ ಆಯ್ಕೆ ಮಾಡಿದ್ದು. ಸ್ಪರ್ಧೆಯ ನಿಯಮಾನುಸಾರ ಮೂರೂ ಭಾಷೆಗಳ ಲೇಖನಗಳನ್ನು ಪರಿಶೀಲಿಸಿದ ತೀರ್ಪುಗಾರರು ಹಫ್ಸಾ ಬಾನು ಬೆಂಗಳೂರು ಬರೆದ ಕನ್ನಡದ ಲೇಖನ ‘ಹೃದಯದ ಮಾತುಗಳು’ ಇದಕ್ಕೆ ಪ್ರಥಮ ಬಹುಮಾನವನ್ನು ಘೋಷಿಸಿರುತ್ತಾರೆ.

ದ್ವಿತೀಯ ಸ್ಥಾನಕ್ಕೆ ಸಾತ್ವಿಕ ಜನರತ್ನಂ-‘ದ ಕೊರೋನಾ ಎಕ್ಸ್‌ಪಿರಿಯೆನ್ಸ್'(ಇಂಗ್ಲಿಷ್), ತೃತೀಯ ಸ್ಥಾನಕ್ಕೆ ಜಯಾ ಸಂತೋಷ್-ಗೋಯಿಂಗ್ ಫ್ರಮ್ ಮಿ ಟು ಮೋಮ್-ಮೈ(ಇಂಗ್ಲಿಷ್), ಹಾಗೂ ಸಮಾಧಾನಕರ ಬಹುಮಾನಕ್ಕೆ ಜಯಪ್ರಕಾಶ್- ‘ನೋವಿನ ಬೆಂಕಿಯಲ್ಲಿ ಬೆಂದರಳಿದ ಬಣ್ಣ – ವ್ಯಾನ್ ಗೊ(ಕನ್ನಡ)’, ರಿಷಬ್ ನೇಮಾ – ಅಪ್ನೆ ಮಸ್ಥಿಷ್ಕ್ ಕೊ ಸ್ವಸ್ಥ್ ರಖ್ನೇ ಮೇ ಯೇ ಪಾಯಿಂಟ್ ಕರೇಂಗೆ ಆಪ್‌ ಕಿ ಮದದ್'(ಹಿಂದಿ), ವರ್ಷ ರಾವ್ ‘ಪತ್ರೊಡೆ – ಎ ಟೇಲ್ ಆಫ್ ಕ್ಯುಲಿನರಿ ಮಾಸ್ಟರ್ ಪೀಸ್'(ಇಂಗ್ಲಿಷ್) ಅಯ್ಕೆಯಾದುವು.

ಮೊದಲ ಬಹುಮಾನವು 10000‌ರೂ ನಗದು ಮತ್ತು ಸರ್ಟಿಫಿಕೇಟ್ ಒಳಗೊಂಡಿದ್ದು. ದ್ವಿತೀಯ 5000ರೂ ತೃತೀಯ 2000ರೂ ಹಾಗೂ ಸಮಾಧಾನಕರ ಬಹುಮಾನ ಪಡೆದ ಮೂರು ಲೇಖನಗಳು ತಲಾ 1೦೦೦ರೂ ನಗದು ಹಾಗೂ ಸರ್ಟಿಫಿಕೇಟ್ ಗಳನ್ನೊಳಗೊಂಡಿದೆ.
ಕಾಕತಾಳೀಯವೆಂಬಂತೆ ಈ ಫಲಿತಾಂಶವು ಕನ್ನಡ ರಾಜ್ಯೋತ್ಸವದಂದೇ ಹೊರಬಿದ್ದಿದ್ದು ಕನ್ನಡ ಭಾಷೆಯ ಹಿರಿಮೆಯನ್ನು ಎತ್ತಿ ಹಿಡಿದಿದೆ.

Home
Videos
Shop
error: Content is protected !!