ಕವಿತೆ
ಚೀಲಿ ದೇಶದ ಕವಿ ನಿಕಾನೋರ್ ಪರ್ರಾನ ಪದ್ಯ ಅನುವಾದ
ಚೀಲಿ ದೇಶದ ಕವಿ ನಿಕಾನೋರ್ ಪರ್ರಾನ ಪದ್ಯ ಅನುವಾದ
“ನಾನು ಹೇಳಿದ್ದೆಲ್ಲವನ್ನು ಹಿಂತೆಗೆದುಕೊಳ್ಳುವೆ “
ಮೂಲ: ನಿಕಾನೋರ್ ಪರ್ರಾ
ಅನುವಾದ : ವಿಶಾಲ್ ಮ್ಯಾಸರ್
ವಿದಾಯ ಹೇಳುವ ಮುನ್ನ
ನನ್ನದೊಂದು ಕೋರಿಕೆ
ಓ ಹೃದಯವಂತ ಓದುಗನೆ
ಈ ಹೊತ್ತಿಗೆಗೆ ಬೆಂಕಿ ಹೊತ್ತಿಸು
ಹೇಳಬೇಕಾದದ್ದು ಹೇಳಲಾಗಲಿಲ್ಲ
ನೆತ್ತರ ಹರಿಸಿ ಚಿತ್ರಿಸಿದರು
ಮನದ ಮಾತು ಬರೆಯಲಾಗಲಿಲ್ಲ
ನನಗಿಂತಲೂ ದುಃಖಿತ
ನಿಮಗೆ ಯಾರೂ ಸಿಗುವುದಿಲ್ಲ
ಸ್ವಂತದ ನೆರಳಿನಿಂದಲೆ ಸೋತಿದ್ದೇನೆ
ಆಡಿದ ಪ್ರತಿ ಮಾತು ನನ್ನ ಮೇಲೆ ಪ್ರತೀಕಾರ ತೀರಿಸಿವೆ
ಕ್ಷಮಿಸು ಓದುಗನೆ ಒಳ್ಳೆಯ ಓದುಗನೇ
ಒಂದು ಹೃದ್ಯ ಅಪ್ಪುಗೆಯ ವಿದಾಯ ಹೇಳದಿದ್ದರೂ ಕಣ್ಣೀರಿನ ನಗುವಿನೊಂದಿಗೆ ಮನ ನೊಂದು ವಿದಾಯ ಹೇಳುವೆ
ಅಷ್ಟು ಮಾತ್ರ ಮಾಡಬಲ್ಲೆ
ದಯಮಾಡಿ ನನ್ನ ಕೊನೆಯ ಮಾತು ಕೇಳು
ಹೇಳಿದ್ದೆಲ್ಲ , ಬರೆದದ್ದೆಲ್ಲ
ವಾಪಸು ತೆಗೆದುಕೊಳ್ಳುವೆ
ಜಗದ ಕಹಿಯ ಗಂಟಲಲ್ಲಿ ಇಟ್ಟುಕೊಂಡು ಮಾತನಾಡಿದ್ದೆಲ್ಲವನ್ನು
ವಾಪಸು ತೆಗೆದುಕೊಳ್ಳುವೆ
“I Take Back Everything I’ve Said”
Before I go
I’m supposed to get a last wish:
Generous reader
burn this book
It’s not at all what I wanted to say
Though it was written in blood
It’s not what I wanted to say.
No lot could be sadder than mine
I was defeated by my own shadow:
My words took vengeance on me.
Forgive me, reader, good reader
If I cannot leave you
With a warm embrace, I leave you
With a forced and sad smile.
Maybe that’s all I am
But listen to my last word:
I take back everything I’ve said.
With the greatest bitterness in the world
I take back everything I’ve said.
translated by Miller Williams
- Nicanor Parra

ಹೊಸಪೇಟೆಯವರು. ಪ್ರಸ್ತುತ ವಿಜಯನಗರ ಮಹಾವಿದ್ಯಾಲಯ ಹೊಸಪೇಟೆಯಲ್ಲಿ ಬಿ.ಎಸ್ಸಿ ಪದವಿಯನ್ನ ವ್ಯಾಸಂಗ ಮಾಡುತ್ತಿದ್ದಾರೆ. “ಬಟ್ಟೆಗಂಟಿದ ಬೆಂಕಿ” ಇವರ ಪ್ರಕಟಿತ ಕವಿತಾ ಸಂಕಲನ. ತಳ ಸಮುದಾಯಗಳ ಪರಂಪರೆ , ಮೌಖಿಕ ಪರಂಪರೆಗಳೊಂದಿಗೆ ಸದಾ ಮಾತು ಕಥೆಗೆ ಇಳಿಯುವ ಇವರು ಅವುಗಳನ್ನು ಕಾವ್ಯವಾಗಿಸುವ ಪ್ರಯತ್ನವನ್ನು ಮಾಡುತ್ತಾರೆ. ಬರವಣಿಗೆ ಬಿಟ್ಟು ಪ್ರವಾಸ ಇವರ ನೆಚ್ಚಿನ ವಿಷಯ. ಇವರ ಬರಹ, ಲೇಖನ, ಕವನ, ವಿವಿಧ ಪತ್ರಿಕೆ ಹಾಗೂ ಅಂತರ್ಜಾಲ ಸುದ್ದಿ ವಾಹಿನಿಗಳಲ್ಲಿ ಪ್ರಕಟವಾಗಿವೆ.




