ಲೋಕಲ್ ನ್ಯೂಸ್
ಆಮಿರ್ ಅಶ್’ಅರೀ ಬನ್ನೂರು ಅವರಿಗೆ ಮುಅಲ್ಲಿಂ ಕಾವ್ಯ ಪ್ರಶಸ್ತಿ ಪ್ರಧಾನ
ಕಾಸರಗೋಡು: ಜಾಮಿಯಾ ಸಅದಿಯಾ ಅರಬಿಯಾ ಕರ್ನಾಟಕ ವಿದ್ಯಾರ್ಥಿ ಸಂಘಟನೆಯಾದ Mosk ವಿಶ್ವ ಪ್ರವಾದಿ ಮುಹಮ್ಮದ್ ಪೈಗಂಬರ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಜನ್ಮ ದಿನದ ಅಂಗವಾಗಿ ಆಯೋಜಿಸಲಾಗಿದ್ದ. ಮದೀನಕ್ಕೊಂದು ಕಬ್ಬ ಮುತಅಲ್ಲಿಂ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಯುವ ಕವಿ, ಖಿದ್ಮಾ ಫೌಂಡೇಶನ್ ಸಂಚಾಲಕ ಆಮಿರ್ ಅಶ್’ಅರೀ ಬನ್ನೂರು ಅವರಿಗೆ ಸಅದಿಯಾ ಕರ್ನಾಟಕ ವಿದ್ಯಾರ್ಥಿ ಸಂಘಟನೆ Mosk ಮುಅಲ್ಲಿಂ ಕವಿ ಕಾವ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಸಅದಿಯಾ ಮುದರ್ರಿಸ್ ಸಯ್ಯದ್ ಇಸ್ಮಾಈಲ್ ಅಲ್ ಹಾದಿ ಪ್ರಶಸ್ತಿ ಪ್ರಧಾನ ಮಾಡಿದರು. ಪ್ರಶಸ್ತಿ ಸ್ವಿಕರಿಸಿ ಮಾತನಾಡಿದ ಆಮಿರ್ ಅಶ್’ಅರೀ ಬನ್ನೂರು, ವಿದ್ಯಾರ್ಥಿ ಜೀವನವು ಪ್ರಯತ್ನಿಸುವವರಿಗೆ ಗೋಲ್ಡನ್ ಅವಕಾಶವಾಗಿದೆ. ಅದನ್ನು ಸದುಪಯೋಗ ಪಡಿಸಿಕೊಂಡು, ನಿರಂತರವಾದ ಪ್ರಯತ್ನಗಳಿಂದ ಮುನ್ನಡೆದರೆ ಮಾತ್ರ ಯಶಸ್ಸಿನ ಗುರಿ ತಲುಪಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು. ಇದೇ ವೇಳೆ ಸಂಸ್ಥೆಯ ಅಧ್ಯಾಪಕರು ಹಾಗೂ ಕನ್ನಡ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು ಎಂದು ಸಅದಿಯಾ ಕನ್ನಡ ವಿದ್ಯಾರ್ಥಿ ಸಂಘಟನೆ ಪ್ರಕಟಣೆಯಲ್ಲಿ ತಿಳಿಸಿದೆ.






