ಲೋಕಲ್ ನ್ಯೂಸ್
ಸ್ನೇಹತೀರಂ ಬಳಗಕ್ಕೆ ಹೊಸ ಸಾರಥ್ಯ
ಮಡಿಕೇರಿ: ಕಳೆದ ಹತ್ತು ವರ್ಷಗಳಿಂದ ವಿರಾಜಪೇಟೆ ತಾಲ್ಲೂಕಿನ ಹುಂಡಿ ಗ್ರಾಮವನ್ನು ಕೇಂದ್ರೀಕರಿಸಿ ಸಮಾಜಮುಖಿ ಕಾರ್ಯಗಳಿಂದ ತೊಡಗಿಕೊಂಡಿರುವ ಸ್ನೇಹತೀರಂ ಬಳಗದ 2024-25ನೇ ಸಾಲಿನ ನೂತನ ಆಡಳಿತ ಮಂಡಳಿ ರಚನೆಯಾಗಿದೆ.
ಸೆಪ್ಟೆಂಬರ್ ಅಂತ್ಯದಲ್ಲಿ ಸುಬೈರ್ ಟಿ.ಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಬೂತಾಹಿರ್ ಲೆಕ್ಕಪತ್ರವನ್ನು ಮಂಡಿಸಿದರು. ನಂತರ ನೂತನ ಸಮಿತಿಯ ರಚನೆ ಮಾಡಲಾಯಿತು.
2024-25ನೇ ಸಾಲಿನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ನೌಷಾದ್ ಎನ್.ಎಂ, ಉನೈಸ್ ಪಿ.ಐ ಅವರನ್ನು ಉಪಾಧ್ಯಕ್ಷರಾಗಿ ನೇಮಕ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ಉನೈಸ್ ಬಿ.ಕೆ ಸಹ ಕಾರ್ಯದರ್ಶಿಯಾಗಿ ಜಾಫರ್ ಸಿ.ಎ ಹಾಗೂ ಕೋಶಾಧಿಕಾರಿಗಳಾಗಿ ನೌಷಾದ್ ಪಿ.ಎಂ ಹಾಗೂ ಹಕೀಂ ಪಿ.ಎ ಆಯ್ಕೆಯಾದರು. ಸಮಿತಿ ಸದಸ್ಯರಾಗಿ ಸುಬೈರ್ ಟಿ.ಎಂ, ಇಸ್ಮಾಯಿಲ್ ಬಿ.ಕೆ, ರಝಾಕ್ ಕೆ.ಎಚ್, ಸಲೀಂ ಪಿ.ಎ ನಿಸಾರ್ ಪಿ.ಎಸ್, ಹಕೀಂ ಪಿ.ಎಂ ತನ್ನೀರ್ ಪಿ.ಐ ಆಯ್ಕೆಯಾಗಿದ್ದಾರೆ.
ಸ್ನೇಹತೀರಂ ಬಳಗವು ಕಳೆದ ಹತ್ತು ವರ್ಷಗಳಿಂದ ಗ್ರಾಮದಲ್ಲಿ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗಿದ್ದು, ಅಲ್ಲದೆ ಬಡ ಹೆಣ್ಣು ಮಕ್ಕಳ ವಿವಾಹಕ್ಕೆ ಹಾಗೂ ಬಡ ರೋಗಿಗಳಿಗೆ ನೆರವು ನೀಡುತ್ತಾ ಬಂದಿದೆ.





