ಲೋಕಲ್ ನ್ಯೂಸ್
ರಾಷ್ಟ್ರಮಟ್ಟದ ಕಾಯಕ ರತ್ನ ರಾಷ್ಟ್ರ ಪ್ರಶಸ್ತಿಗೆ ಆಯ್ಕೆ
ಬೆಂಗಳೂರು: ಬೆಳದಿಂಗಳ ಆಶ್ರಯ ಟ್ರಸ್ಟ್ (ರಿ)ಬೆಂಗಳೂರು, ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ , ಶ್ರೀ ಕೃಷ್ಣರಾಜ ಪರಿಷತ್ ಸಭಾಂಗಣದಲ್ಲಿ ದಿನಾಂಕ 01-10-2023ರ ಭಾನುವಾರದಂದು ನಡೆದ “ರಾಷ್ಟ್ರ ಮಟ್ಟದ ಬೆಳದಿಂಗಳ ಸಂಭ್ರಮ” ಕಾರ್ಯಕ್ರಮದಲ್ಲಿ ಶಿಕ್ಷಣ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಮಾಡುತ್ತಿರುವ ಸಾಧನೆಗಾಗಿ ಓವಿಸ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ಕನ್ನಡ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀಮತಿ ಡಾ.ಮಮತ ಹೆಚ್.ಎ ರವರಿಗೆ ಕಾಯಕ ರತ್ನ ರಾಷ್ಟ್ರ ಪ್ರಶಸ್ತಿ ನೀಡಿ ಗಣ್ಯರ ಸಮ್ಮುಖದಲ್ಲಿ ಗೌರವಿಸಲಾಯಿತೆಂದು, ಬೆಳದಿಂಗಳ ಆಶ್ರಯ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ ವಿಜಯ್ ಸೂರ್ಯ ರವರು ತಿಳಿಸಿದ್ದಾರೆ.






