ಕೊಡಗು
ಎಸ್ ವೈ ಎಸ್ ಕೊಡಗು ಜಿಲ್ಲಾ ಸಮಿತಿಗೆ ನೂತನ ಸಾರಥ್ಯ
ಕುಶಾಲನಗರ : (ಮಾ.16 ) ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಕೊಡಗು ಜಿಲ್ಲಾ ಸಮಿತಿಯ ವಾರ್ಷಿಕ ಮಹಾಸಭೆ ಹಾಗೂ ಪ್ರತಿನಿಧಿ ಸಮಾವೇಶವು ಮಾರ್ಚ್ 15 ರಂದು ಕುಶಾಲನಗರದ ಬಿಜಿಟಿ ಸಭಾಂಗಣದಲ್ಲಿ ನಡೆಯಿತು.

ರಾಜ್ಯ ನಾಯಕ ಕೆ.ಎ. ಅಬ್ದುರಹ್ಮಾನ್ ರಿಝ್ವಿ ಕಲ್ಕಟ್ಟ ಅವರ ನೇತೃತ್ವದಲ್ಲಿ ನಡೆದ ಮಹಾ ಸಭೆಯನ್ನು ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಫೀಳ್ ಸಅದಿ ಉದ್ಘಾಟಿಸಿದರು. ಸಭಾಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷರಾದ ಸಯ್ಯಿದ್ ಇಲ್ಯಾಸ್ ಸಖಾಫಿ, ಅಲ್-ಹೈದರೂಸಿ ವಹಿಸಿದ್ದರು. ವೇದಿಕೆಯಲ್ಲಿ SYS ಮುಖಂಡರಾದ ಮುಸ್ತಫಾ ಸಖಾಫಿ, ಅಬ್ದುಲ್ಲ ಸಖಾಫಿ, KCF ನಾಯಕರಾದ ಅಬೂಬಕ್ಕರ್ ಕೊಟ್ಟಮುಡಿ, KMJ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಾಜಿ ಕುಂಜಿಲ ಉಪಸ್ಥಿತರಿದ್ದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಪಿ. ಮೊಯ್ದೀನ್ ಪೊನ್ನತ್ ಮೊಟ್ಟೆ ಸ್ವಾಗತ ಕೋರಿದರು ಹಾಗೂ ಕಳೆದ ಸಾಲಿನ ವರದಿ ವಾಚಿಸಿದರು.
ನಂತರ ಜಿಲ್ಲೆಯ ಆಯ್ದ ಪ್ರತಿನಿಧಿ ಗಳಿಗಾಗಿ ಬಹು:ಕುಂಬಡಾಜೆ ಅಬೂಬಕ್ಕರ್ ಫೈಝಿ ಕಾಸರಗೋಡು ಸಂಘಟನಾ ತರಗತಿಯನ್ನು ನಡೆಸಿ ಕೊಟ್ಟರು. ನಾಯಿಬ್ ಖಾಝಿ ಶಾದುಲಿ ಫೈಝಿ ನೂತನ ಸಮಿತಿಯನ್ನು ಘೋಷಿಸಿದರು.

ಅಧ್ಯಕ್ಷರಾಗಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಕೊಳಕೇರಿ, ಪ್ರಧಾನ ಕಾರ್ಯದರ್ಶಿಯಾಗಿ ಆಹ್ಮದ್ ಮದನಿ ಗುಂಡಿಕೆರೆ, ಕೋಶಾಧಿಕಾರಿಯಾಗಿ ಅಬ್ದುಲ್ಲ ನೆಲ್ಲಿಹುದಿಕೇರಿ, ಉಪಧ್ಯಕ್ಷರಾಗಿ ಅಬೂಬಕ್ಕರ್ ಮದನಿ ಮಾಲ್ದಾರೆ, ಕಾರ್ಯದರ್ಶಿಗಳಾಗಿ (ದಅವಾ) ಅಬ್ದುಲ್ ಅಝೀಜ್ ಸಖಾಫಿ ಕೊಡ್ಲಿಪೇಟೆ, (ಸಂಘಟನೆ) ಯಾಕೂಬ್ ಮಾಸ್ಟರ್ ಕೊಳಕೇರಿ, (ಸಾಂತ್ವನ) ಅಝೀಝ್ ಮುಸ್ಲಿಯಾರ್ ಮಾಲ್ದಾರೆ, (ಸೋಷಿಯಲ್) ಅರಾಫತ್ ನಾಪೋಕ್ಲು,(ಕಲ್ಬರಲ್)ಹಸೈನಾರ್ ಮುಸ್ಲಿಯಾರ್ ಸುಂಟಿಕೊಪ್ಪ, (ಇಸಾಬ) ಶರೀಫ್ ಹೊಸತೋಟ ಎಂಬವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸಯ್ಯಿದ್ ಇಲ್ಯಾಸ್ ಸಖಾಫಿ ಅಲ್ ಹೈದ್ರೋಸಿ ಎರುಮಾಡ್, ವಿ.ಪಿ. ಮೊಯ್ದಿನ್ ಪೊನ್ನತ್ ಮೊಟ್ಟೆ, ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ, ಸಮದ್ ನಿಝಾಮಿ ಕಲ್ಕಂದೂರು, ಸಕೀರ್ ಮಾಸ್ಟರ್ ಪೊನ್ನತ್ ಮೊಟ್ಟೆ, ಶಿಹಾಬ್ ಲತೀಫಿ ನಲ್ವತ್ತೇಕರೆ, ಉಸ್ಮಾನ್ ತಾವೂರು, ಮುನೀರ್ ಮಹ್ಳರಿ ಪಡಿಯಾಣಿ, ಅಶ್ರಫ್ ಎರುಮಾಡ್, ಸಂಶುದ್ದೀನ್ ಅಂಜದಿ ಬಲಮುರಿ, ಸಲಾಂ ಕೆ.ಪಿ. ಗೋಣಿಕೊಪ್ಪ, ಸಲಾಂ ಇಂಫೋಪಾರ್ಕ್ ಗೋಣಿಕೊಪ್ಪ, ಅಲಿ ಸಅದಿ ಹುಂಡಿ ಅವರನ್ನು ಆಯ್ಕೆ ಮಾಡಲಾಯಿತು.
ಇಲ್ಯಾಸ್ ತಂಙಳ್ ರವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ನೂತನ ಕಾರ್ಯದರ್ಶಿ ವಂದಿಸಿದರು.





