ಕೊಡಗು
ಕೊಡಗು ಜಿಲ್ಲಾ SSF ನಿಂದ ಆಝಾದಿ ರ‍್ಯಾಲಿ
ಸುಂಟಿಕೊಪ್ಪ: SSF ಕೊಡಗು ಜಿಲ್ಲಾ ಸಮಿತಿ ವತಿಯಿಂದ 77-ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸುಂಟಿಕೊಪ್ಪ ಪಟ್ಟಣದಲ್ಲಿ ಬೃಹತ್ ರ‍್ಯಾಲಿ ನಡೆಸಲಾಯಿತು.
ಕೂರ್ಗ್ ಜಂಇಯ್ಯತುಲ್ ಉಲಮಾ ಅಧ್ಯಕ್ಷರಾದ ಸಯ್ಯಿದ್ ಶಿಹಾಬುದ್ದೀನ್ ತಂಙ್ಙಳ್ ರವರು ಕಾರ್ಯಕ್ರಮ ಉದ್ಘಾಟಿಸಿದರು.
ಮುಖ್ಯ ಭಾಷಣಕಾರರಾಗಿ SYS ರಾಜ್ಯ ನಾಯಕರಾದ ಅಹ್ಮದ್ ಶರೀಫ್ ಸಖಾಫಿ ಕಿಲ್ಲೂರ್ ರವರು ಭಾರತದಲ್ಲಿರುವ ಭಾವೈಕ್ಯತೆಯ ಕುರಿತು ಆಳವಾಗಿ ವಿವರಿಸಿ ಸೆಪ್ಟೆಂಬರ್ 10ರಂದು ಬೆಂಗಳೂರಿನಲ್ಲಿ ನಡೆಯುವ SSF ಗೋಲ್ಡನ್ ಫಿಫ್ಟಿ ಮಹಾ ಸಮ್ಮೇಳನವನ್ನು ಯಶಸ್ವಿಗೊಳಿಸಲು ಕರೆ ನೀಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾll ಮಂತರ್ ಗೌಡ ಮಾತನಾಡುತ್ತಾ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಕಾಂಗ್ರೆಸ್ ನಾಯಕರಾದ ವಿ.ಪಿ ಶಶಿದರ್ ಹಾಗೂ ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಕಾರ್ಯದರ್ಶಿ ಲತೀಫ್ ಸುಂಟಿಕೊಪ್ಪ ಮಾತನಾಡಿದರು.
ಜಿಲ್ಲಾಧ್ಯಕ್ಷರಾದ ಝುಬೈರ್ ಸಅದಿ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೂರ್ಗ್ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಹ್ಸನಿ,SYS ರಾಜ್ಯಾದ್ಯಕ್ಷರಾದ ಹಫೀಲ್ ಸಅದಿ, SSF ಮಾಜಿ ರಾಜ್ಯಾಧ್ಯಕ್ಷ ಇಸ್ಮಾಯಿಲ್ ಸಖಾಫಿ, ಕರ್ನಾಟಕ ಮುಸ್ಲಿಂ ಜಮಾಅತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಾಜಿ, SJM ಜಿಲ್ಲಾಧ್ಯಕ್ಷರಾದ ಮುಸ್ತಫಾ ಸಖಾಫಿ, ಪ್ರಧಾನ ಕಾರ್ಯದರ್ಶಿ ಅಶ್ರಫ್ ಸಖಾಫಿ, SYS ಜಿಲ್ಲಾಧ್ಯಕ್ಷರಾದ ಹಮೀದ್ ಮುಸ್ಲಿಯಾರ್ ಪ್ರಧಾನ ಕಾರ್ಯದರ್ಶಿ ಅಹ್ಮದ್ ಮದನಿ SSF ರಾಷ್ಟ್ರೀಯ ಸಮಿತಿ ಕಾರ್ಯದರ್ಶಿ ಯಾಕೂಬ್ ಮಾಸ್ಟರ್, SSF ಜಿಲ್ಲಾ ಕೋಶಾಧಿಕಾರಿ ಶಿಹಾಬ್ ತಂಙಳ್ ಹೊಸತೋಟ, SSF ಮಾಜಿ ಜಿಲ್ಲಾದ್ಯಕ್ಷರಾದ ಶಾಫಿ ಸಅದಿ, ಮಾಜಿ ಕೋಶಾಧಿಕಾರಿ ಶರೀಫ್ ಮಾಸ್ಟರ್ ಹೊಸತೋಟ ಉಪಸ್ಥಿತರಿದ್ದರು ಗದ್ದೆಹಳ್ಳ ಸರ್ಕಳ್ ನಿಂದ ಪ್ರಾರಂಭಗೊಂಡ ಬೃಹತ್ ಆಝಾದಿ ಸಂದೇಶ ಜಾಥಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿ ಸುಂಟಿಕೊಪ್ಪ ಪಟ್ಟಣದ ವಾಹನ ಚಾಲಕರ ಹಾಗೂ ಮಾಲೀಕರ ಸಂಘದ ಸಾರ್ವಜನಿಕ ವೇದಿಕೆಯಲ್ಲಿ ಸಮಾಪ್ತಿ ಗೊಂಡಿತು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜುನೈದ್ ಅಮ್ಮತ್ತಿ ಸ್ವಾಗತಿಸಿ ವಂದಿಸಿದರು.






