ಕೊಡಗು
ಕೆ.ಹೆಚ್.ಮುಸ್ತಫ ರವರಿಗೆ ಡಾಕ್ಟರೇಟ್
ಮಾದಾಪುರ: ಸೋಮವಾರಪೇಟೆ ತಾಲ್ಲೂಕು ಮಾದಾಪುರದ ನಿವಾಸಿ ದಿ:ಹಸೈನಾರ್ ಹಾಗೂ ಸುಬೈದಾ ರವರ ಮಗನಾದ ಮುಸ್ತಫ ಕೆ ಎಚ್ ರವರು “ಕನ್ನಡ ಸಾಹಿತ್ಯ ಸಂಸ್ಕೃತಿ ವಿಮರ್ಶೆ: ಕಿ.ರಂ. ನಾಗರಾಜು ಮಾದರಿ” ಎಂಬ ಮಹಾಸಂಶೋಧನ ಪ್ರಬಂದ ಮಂಡಿಸಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ದಿನಾಂಕ 15-03-2023 ರಂದು ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳ ಗಂಗೋತ್ರಿಯಲ್ಲಿ ನಡೆದ ಘಟಿಕೋತ್ಸವದಲ್ಲಿ ಡಾಕ್ಟರೇಟ್ ಪದವಿ ಪಡೆದರು. ಇವರು ಪ್ರಸ್ತುತ ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿದ್ದಾರೆ.





