Connect with us

ಕರ್ನಾಟಕ

ನಮಗೂ ಫ್ರೀ ನಿಮಗೂ ಫ್ರೀ ಅಂತಾ ಹೇಳಿದ್ದ ಕಾಂಗ್ರೆಸ್‌ ಈಗ ಜನತೆಗೆ ದೋಖಾ ಮಾಡ್ತಿದೆ: ಬೊಮ್ಮಾಯಿ

Published

on

ಬೆಂಗಳೂರು: ಚುನಾವಣೆ ಸಂದರ್ಭದಲ್ಲಿ ಜನತೆಗೆ ನೀಡಿದ್ದ ಐದು ಗ್ಯಾರಂಟಿಗಳ ಜಾರಿ ವಿಚಾರದಲ್ಲಿ ಜನರಿಗೆ ಕಾಂಗ್ರೆಸ್ ದೋಖಾ ಮಾಡಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಟೀಕಿಸಿದರು.

ಸೋಮವಾರ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಢಿಯಲ್ಲಿ ಮಾತನಾಡಿದ ಅವರು, ” ಕಾಂಗ್ರೆಸ್‌ನವರು ಚುನಾವಣೆ ಸಂದರ್ಭದಲ್ಲಿ ಎಲ್ಲರಿಗೂ ಉಚಿತ, ನಮಗೂ ಫ್ರೀ ನಿಮಗೂ ಫ್ರೀ ಅಂತ ಜನರಿಗೆ ಭರವಸೆ ನೀಡಿ, ಈಗ ಒಬ್ಬೊಬ್ಬರು ಒಂದೊಂದು ರೀತಿಯ ಹೇಳಿಕೆ ನೀಡುತ್ತಿರುವುದು ನೋಡಿದರೆ ಜನರಿಗೆ ಕಾಂಗ್ರೆಸ್ ದೋಖಾ ಮಾಡಿದೆ. ತಾತ್ವಿಕ ಆದೇಶದಲ್ಲಿಯೂ ಎಲ್ಲರಿಗೂ ಉಚಿತ ಎಂದು ಹೇಳಿದ್ದರು. ಈಗ ಬೇರೆ ಬೇರೆ ಹೇಳಿಕೆ ನೀಡುತ್ತಿದ್ದಾರೆ. ಕಾಂಗ್ರೆಸ್ ನವರು ಹೇಳುವುದೊಂದು ಮಾಡುವುದೊಂದು. ಅವರ ಬಣ್ಣ ಬಯಲಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.

Continue Reading
Home
Videos
Shop
error: Content is protected !!