ಕರ್ನಾಟಕ
ಚುನಾವಣೆ ಆಯೋಗವನ್ನು ದುರ್ಬಲಗೊಳಿಸುವ ಹುನ್ನಾರ; ಟಿಯುಸಿಐ ಖಂಡನೆ
ಬೆಂಗಳೂರು: ಕೇಂದ್ರದ ಮೋದಿ ಸರ್ಕಾರವು ರಾಜ್ಯ ಸಭೆಯಲ್ಲಿ ಮಂಡಿಸಿದ ಹೊಸ ಚುನಾವಣಾ ಪೆನಾಲ್ ಮಸೂದೆ ಅಂಗೀಕಾರವಾದದ್ದೆ ಆದರೆ, ಸಂಸತ್ತು ಕೇವಲ ಕಲ್ಲು ಮಣ್ಣಿನ ಕಟ್ಟಡ ಮಾತ್ರವಾಗಿ ಉಳಿಯಲಿದೆ ಎಂದು ಟಿಯುಸಿಐ ರಾಜ್ಯಾಧ್ಯಕ್ಷರು ಆರ್ ಮಾನಸಯ್ಯ ಆತಂಕ ವ್ಯಕ್ತಪಡಿಸಿದರು.
ಪ್ರಜಾಪ್ರಭುತ್ವದ ಆಧಾರ ಸ್ಥಂಭವಾದ ಭಾರತ ಚುನಾವಣಾ ಆಯೋಗವು ನೂತನ ಮಸೂದೆ ಜಾರಿಯಾದರೆ ಭಾಜಪ ಚುನಾವಣಾಯೋಗ ಆಗಲಿದೆ. ಪ್ರಸ್ತಾಪಿತ ಮಸೂದೆಯು ಭಾರತದ ಮುಖ್ಯ ನ್ಯಾಯಮೂತಿ೯ಯನ್ನು , ಸರ್ಕಾರದ ಕಾಯ೯ದಶಿ೯ ದಜೆ೯ಗೆ ತಳ್ಳಲಿದೆ. ಭಾರತ ಮುಖ್ಯ ಚುನಾವಣಾಯುಕ್ತರನ್ನು ಚುನಾಯಿಸುವ(ನೇಮಿಸುವ)ಅಧಿಕಾರ ಪ್ರಧಾನಿ ಕಾಯಾ೯ಲಯದ ಪಾಲಾಗುತ್ತದೆ. ಸ್ವಾಯತ್ತತೆ ಕಳೆದು ಕೊಂಡ, ಬಿಜೆಪಿ ಪ್ರಾಯೋಜಿತ ಚುನಾವಣಾಯೋಗವು ಬಿಜೆಪಿಯೇತರ ಪಕ್ಷಗಳನ್ನು ಅಧಿಕಾರಕ್ಕೇರಲು ಬಿಡ ಬಹುದೆ?
ಒಂದಂತೂ ಖರೆ, ಪ್ರಜಾಪ್ರಭುತ್ವ ಹಾಗೂ ಪಾರದಶ೯ಕ ಪದ್ದತಿಯಡಿ ಬರುವ ಲೋಕಸಭಾ ಚುನಾವಣೆ ನಡೆದದ್ದೆ ಆದಲ್ಲಿ ಕನಾ೯ಟಕ ಕಲಿಸಿದ ಪಾಠವನ್ನೆ ಬಿಜೆಪಿ ಮರಳಿ ಕಲಿಯ ಬೇಕಾಗುತ್ತದೆ. ಬಿಜೆಪಿಯು ಮುಂದಿನ ಸೋಲಿನ ಭೀತಿಯಿಂದ ನರುಳುತ್ತಿದೆ. ಇದರಿಂದ ಪಾರಾಗಲು ಚುನಾವಣಾಯೋಗವನ್ನೆ ತನ್ನ ರಾಜಕೀಯ ಸಂಸ್ಥೆಯನ್ನಾಗಿಸಲು ಈ ಮಸೂದೆಯ ಅಂಗೀಕಾರಕ್ಕೆ ಮುಂದಾಗಿದೆ ಎಂದರು.
ಇಂಡಿಯಾ ದೇಶದ ಎಲ್ಲಾ ಪ್ರತಿಪಕ್ಷಗಳು, ಎಡ ಶಕ್ತಿಗಳು, ಕಾಮಿ೯ಕ-ರೈತ ಸಂಘಟನೆಗಳು, ದಮನಿತ ಸಮುದಾಯಗಳಾದ ದಲಿತ, ಕ್ರೈಸ್ತ, ಮುಸ್ಲಿಮ್, ಆದಿವಾಸಿ ಜನಾಂಗಗಳು ವಿಶೇಷವಾಗಿ ಮಹಿಳೆ, ವಿಧ್ಯಾಥಿ೯ ಯುವ ಜನಾಂಗಗಳು ಚುನಾವಣಾ ಆಯೋಗದ ಉಳುವಿಗಾಗಿ ದನಿ ಎತ್ತಬೇಕಿದೆ ಎಂದು ಆಗ್ರಹಿಸಿದರು.






