Info
ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಮತಗಟ್ಟೆ ಯಾವುದು? ಆನ್‌ಲೈನ್‌ನಲ್ಲಿ ಐದೇ ನಿಮಿಷದಲ್ಲಿ ಚೆಕ್ ಮಾಡಿಕೊಳ್ಳಿ

ಪ್ರಜಾಪ್ರಭುತ್ವವದ ಅತಿ ದೊಡ್ಡ ಹಬ್ಬ ಮತದಾನಕ್ಕೆ ಇನ್ನೇನು ದಿನಗಣನೆ (ಮೇ 10) ಆರಂಭವಾಗಿದೆ. ಈ ನಡುವೆ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಮತದಾನ ಮಾಡುವ ಮತಗಟ್ಟೆ ಯಾವುದು? ಈ ಎಲ್ಲ ಮಾಹಿತಿ ಇದೀಗ ಆನ್‌ಲೈನ್‌ನಲ್ಲಿಯೇ ನೀವು ಚೆಕ್ ಮಾಡಿಕೊಳ್ಳಬಹುದು. ಇಲ್ಲಿದೆ ನೋಡಿ ಆ ಸರಳ ವಿಧಾನ
ಮೇ 10ರಂದು ರಾಜ್ಯದಲ್ಲಿ ಒಂದೇ ಹಂತದಲ್ಲಿ 224 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಈಗಾಗಲೇ ರಾಜಕೀಯ ನಾಯಕರು ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಬಿರುಸಿನ ಪ್ರಚಾರದಲ್ಲಿ ಬಿಜಿಯಾಗಿದ್ದಾರೆ. ಸ್ಟಾರ್ ಪ್ರಚಾರಕರಾಗಿ ರಾಷ್ಟ್ರೀಯ ಪಕ್ಷದವರ ಆಗಮನವೂ ಆಗಿದೆ. ಸಿನಿಮಾ ಮಂದಿಯೂ ರಣ ಬಿಸಿಲಿನಲ್ಲಿಯೇ ಕ್ಯಾಂಪೇನ್ ಮಾಡುತ್ತಿದ್ದಾರೆ.
ಈ ಮತದಾನದ ಸಮಯದಲ್ಲಿ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೀವು ಮುಂಚಿತವಾಗಿಯೇ ನೋಡಬಹುದು. ಅಷ್ಟೇ ಅಲ್ಲ ನೀವು ಯಾವ ಮತಗಟ್ಟೆಯಲ್ಲಿ ಮತ ಚಲಾಯಿಸಬೇಕು ಎಂಬ ಅಂಶವೂ ಆನ್‌ಲೈನ್‌ನಲ್ಲಿ ವೀಕ್ಷಿಸಬಹುದು. ಇಲ್ಲಿದೆ ನೋಡಿ ಆ ಮಾಹಿತಿ.

ಆಯ್ಕೆ 1: ಮೊದಲಿಗೆ ಭಾರತ ಸರ್ಕಾರದ ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್ https://www.nvsp.in/ ಗೆ ಲಾಗಿನ್ ಆಗಿ. ಹೊಸ ಬಳಕೆದಾರರಾಗಿದ್ದರೆ, ನಿಮ್ಮ ಫೋನ್ ನಂಬರ್ ಹಾಕಿ ರಿಜಿಸ್ಟರ್ ಮಾಡಿಕೊಳ್ಳಿ.
ಆಯ್ಕೆ 2: ಲಾಗಿನ್ ಆದ ಬಳಿಕ ಆಗ ಮೇಲೆ ಕಾಣುವ ಈ ವಿಂಡೋ ತೆರೆದುಕೊಳ್ಳಲಿದೆ. ವಿಂಡೋದಲ್ಲಿ ವೋಟರ್ ಪೋರ್ಟಲ್ (Voter Portal) ತೆರೆದುಕೊಳ್ಳಲಿದೆ.
ಆಯ್ಕೆ 3: ಆಗ ಅಲ್ಲಿಯೇ ಮೇಲಿನ ಸಾಲಿನಲ್ಲಿ ಎಲೆಕ್ಟ್ರಾಲ್ ಸರ್ಚ್ (Electoral Search) ಆಯ್ಕೆ ನಿಮಗೆ ಕಾಣಿಸುತ್ತದೆ.
ಆಯ್ಕೆ 4: ಎಲೆಕ್ಟ್ರಾಲ್ ಸರ್ಚ್ ಮೇಲೆ ಕ್ಲಿಕ್ ಮಾಡಿದ ಮೇಲೆ, ನಿಮ್ಮ ಮತದಾರರ ಚೀಟಿಯ ಗುರುತಿನ ಸಂಖ್ಯೆಯನ್ನು ಹಾಕಿ ಕ್ಲಿಕ್ ಮಾಡಿ.
ಆಯ್ಕೆ 5: ಕೊನೆಯದಾಗಿ ನಿಮಗೆ ನಿಮ್ಮ ಹೆಸರಿನ ಸಮೇತ ಮಾಹಿತಿಯ ಪೇಜ್ ತೆರೆದುಕೊಳ್ಳಲಿದೆ. ನೀವು ಮತದಾನ ಮಾಡಬೇಕಾದ ಮತಗಟ್ಟೆ ಮತ್ತುಅದರ ವಿವರವೂ ಕಾಣಿಸಲಿದೆ. ಒಂದು ವೇಳೆ ನಿಮ್ಮ ಹೆಸರಿಲ್ಲದಿದ್ದರೆ, No record Found ಎಂದು ತೋರಿಸಲಿದೆ.




