Connect with us

ಟೆಕ್

ಟ್ವಿಟ್ಟರ್‌ಗಿಂತ ಥ್ರೆಡ್ಸ್‌ ಭಿನ್ನ ಹೇಗೆ? ಇಲ್ಲಿದೆ ಮಾಹಿತಿ

Published

on

ಫೇಸ್‌ಬುಕ್‌ ಮಾತೃಸಂಸ್ಥೆ ಮೆಟಾ ಈಗ ಟ್ವಿಟ್ಟರ್‌ಗೆ ಪರ್ಯಾಯವಾಗಿ ಥ್ರೆಡ್ಸ್‌ ಬಿಡುಗಡೆ ಮಾಡಿದೆ. ಇಂದು ಬಿಡುಗಡೆಯಾದ ಮೊದಲ ದಿನವೇ 1 ಕೋಟಿ ಮಂದಿ ಥ್ರೆಡ್ಸ್‌ ಜಾಯಿನ್ ಆಗಿದ್ದಾರೆ ಎಂದು ಫೇಸ್‌ಬುಕ್‌ ಸಂಸ್ಥಾಪಕ ಮಾರ್ಕ್‌ ಜುಕರ್‌ಬರ್ಗ್‌ ತಿಳಿಸಿದ್ದಾರೆ.

ಟ್ವಿಟ್ಟರ್‌ಗಿಂತ ಥ್ರೆಡ್ಸ್‌ ಭಿನ್ನ ಹೇಗೆ?

ಥ್ರೆಡ್ಸ್‌ ಖಾತೆ ತೆರೆಯಬೇಕಾದರೆ ಇನ್‌ಸ್ಟಾಗ್ರಾಮ್‌ ಖಾತೆ ಬೇಕಾಗುತ್ತದೆ. ಥ್ರೆಡ್ಸ್‌ ಆಪ್‌ ಡೌನ್‌ಲೋಡ್‌ ಮಾಡಿದ ಕೂಡಲೇ ಇನ್‌ಸ್ಟಾದಿಂದ ಬಯೋ ಸೇರಿದಂತೆ ಫಾಲೋವರ್ಸ್‌ಗಳನ್ನು Import ಮಾಡಬೇಕಾ ಅಂತ ಕೇಳುತ್ತದೆ. ಬಳಕೆದಾರರು ಅನುಮತಿ ನೀಡಿದರೆ ಇನ್‌ಸ್ಟಾ ಬಯೋ ನಿಮ್ಮ ಪ್ರೊಫೈಲಿನಲ್ಲಿ ಬಂದಿರುತ್ತದೆ. ಇನ್‌ಸ್ಟಾ ಸ್ನೇಹಿತರ ಪೈಕಿ ಯಾರು ಥ್ರೆಡ್ಸ್‌ಗೆ ಜಾಯಿನ್‌ ಆಗಿದ್ದಾರೋ ಅವರನ್ನು ಇಲ್ಲಿ ಫಾಲೋ ಮಾಡಬಹುದು.

ಥ್ರೆಡ್ಸ್‌ನಲ್ಲಿ ಎಲ್ಲಾ ಬಳಕೆದಾರರು 5 ನಿಮಿಷ ಉದ್ಧದ ವೀಡಿಯೋಗಳನ್ನು ಪೋಸ್ಟ್‌ ಮಾಡಬಹುದು. ನೀಲಿ ಬ್ಯಾಡ್ಜ್‌ ಇಲ್ಲದ ಟ್ವಿಟ್ಟರ್‌ ಬಳಕೆದಾರರು ಗರಿಷ್ಟ 2 ನಿಮಿಷ 20 ಸೆಕೆಂಡ್‌ ಉದ್ದದ ವೀಡಿಯೋ ಪೋಸ್ಟ್‌ ಮಾಡಲು ಅನುಮತಿ ನೀಡುತ್ತದೆ.

ಥ್ರೆಡ್ಸ್‌ನಲ್ಲಿ ಗರಿಷ್ಟ 500 ಪದಗಳನ್ನು ಬಳಸಿ ಪೋಸ್ಟ್‌ ಮಾಡಬಹುದು. ಟ್ವಿಟ್ಟರ್‌ನಲ್ಲಿ 280 ಪದಗಳಿಗೆ ಮಿತಿಯನ್ನು ನಿಗದಿ ಮಾಡಲಾಗಿದೆ.

ಸದ್ಯಕ್ಕೆ ಥ್ರೆಡ್ಸ್‌ನಲ್ಲಿ ಯಾವುದೇ ಜಾಹೀರಾತು ಪ್ರಕಟವಾಗುವುದಿಲ್ಲ. ಇನ್‌ಸ್ಟಾದಲ್ಲಿ ಯಾವೆಲ್ಲ ವಿಷಯಗಳಿಗೆ ಸೆನ್ಸರ್‌ ಮಾಡಲಾಗುತ್ತದೋ ಆ ಎಲ್ಲಾ ವಿಷಯಗಳನ್ನು ಇಲ್ಲೂ ಸೆನ್ಸರ್‌ ಮಾಡಲಾಗುತ್ತದೆ.

ಥ್ರೆಡ್ಸ್‌ಗೆ ಒಮ್ಮೆ ಸೇರ್ಪಡೆಯಾದರೆ ಆ ಖಾತೆಯನ್ನು ಡಿಲೀಟ್‌ ಮಾಡಲು ಸಾಧ್ಯವಿಲ್ಲ. ಥ್ರೆಡ್ಸ್‌ ಖಾತೆ ಡಿಲೀಟ್‌ ಮಾಡಬೇಕಾದರೆ ಇನ್‌ಸ್ಟಾ ಖಾತೆಯನ್ನೇ ಡಿಲೀಟ್‌ ಮಾಡಬೇಕಾಗುತ್ತದೆ. ಬಳಕೆದಾರರು ಯಾವಾಗ ಬೇಕಾದರೂ ಥ್ರೆಡ್ಸ್‌ ಖಾತೆಯನ್ನು ನಿಷ್ಕ್ರಿಯ ಮಾಡಬಹುದು. ಆದರೆ ಇನ್‌ಸ್ಟಾದ ಖಾತೆ ಡಿಲೀಟ್‌ ಮಾಡಿದರೆ ಮಾತ್ರ ಥ್ರೆಡ್ಸ್‌ ಖಾತೆಯನ್ನು ಶಾಶ್ವತವಾಗಿ ಡಿಲೀಟ್‌ ಮಾಡಲು ಸಾಧ್ಯ ಎಂದು ಪ್ರೈವೆಸಿ ಪಾಲಿಸಿಯಲ್ಲಿ ತಿಳಿಸಲಾಗಿದೆ.

ಟ್ವಿಟ್ಟರ್‌ನಲ್ಲಿ ಬಳಕೆದಾರರು ಬೇರೆ ಟ್ವೀಟ್‌ ಲೈಕ್‌ ಮಾಡಿದರೆ ಅದು ಪ್ರತ್ಯೇಕ ಟ್ಯಾಬ್‌ನಲ್ಲಿ ಕಾಣುತ್ತದೆ. ಆದರೆ ಥ್ರೆಡ್ಸ್‌ನಲ್ಲಿ ಲೈಕ್‌ ಮಾಡಿದ್ದನ್ನು ನೋಡಲು ಸಾಧ್ಯವಿಲ್ಲ.

ಥ್ರೆಡ್ಸ್‌ ಪ್ರೊಫೈಲ್‌ ಫೋಟೋದ ಮೇಲ್ಭಾಗದಲ್ಲಿ ಇನ್‌ಸ್ಟಾಖಾತೆ ಕಾಣುತ್ತದೆ. ಇನ್‌ಸ್ಟಾ ಪ್ರೊಫೈಲ್‌ ಫೋಟೋದ ಕೆಳಭಾಗದಲ್ಲಿ ಥ್ರೆಡ್ಸ್‌  ಲಿಂಕ್‌ ಕಾಣುತ್ತದೆ.

Home
Videos
Shop
error: Content is protected !!