Connect with us

ವಿದೇಶ

ಪಾಕಿಸ್ತಾನದ ಮಾಜಿ ಅಧ್ಯಕ್ಷ, ಜನರಲ್ ಪರ್ವೇಜ್ ಮುಷರಫ್ ನಿಧನ

Published

on

ಇಸ್ಲಾಮಾಬಾದ್‌: ಪಾಕಿಸ್ತಾನದ ಮಾಜಿ ಅಧ್ಯಕ್ಷ, ನಿವೃತ್ತ ಸೇನಾ ಜನರಲ್ ಪರ್ವೇಜ್ ಮುಷರಫ್ (79) ಅವರು ದೀರ್ಘಕಾಲದ ಅನಾರೋಗ್ಯದ ಹಿನ್ನೆಲೆಯಲ್ಲಿ ಭಾನುವಾರ ನಿಧನರಾಗಿದ್ದಾರೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ.

ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ದುಬೈನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು ಎಂದು ವರದಿಗಳಲ್ಲಿ ಉಲ್ಲೇಖಿಸಲಾಗಿದೆ.

ಅವರು ಅಮಿಲಾಯ್ಡೋಸಿಸ್‌ ಎಂಬ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಈ ಹಿಂದೆ ಅವರ ಕುಟುಂಬ ತಿಳಿಸಿತ್ತು.

ಅಮಿಲಾಯ್ಡ್ ಪ್ರೋಟೀನ್‌ಗಳು ಅಂಗಾಂಶ ಮತ್ತು ಅಂಗಗಳಲ್ಲಿ ಸಂಗ್ರಹಗೊಂಡರೆ ಈ ಆರೋಗ್ಯ ಸಮಸ್ಯೆ ಎದುರಾಗುತ್ತದೆ. ಇದರಿಂದ ಅಂಗಾಂಗ ವೈಫಲ್ಯ ಉಂಟಾಗುತ್ತದೆ.

ಮುಷರಫ್‌ ಅವರು 1999ರಿಂದ 2008ರ ವರೆಗೂ ಪಾಕಿಸ್ತಾನದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿದ್ದರು.

2007ರಲ್ಲಿ ಸಂವಿಧಾನವನ್ನು ತೆಗೆದು ಹಾಕುವ ಮೂಲಕ ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಗೊಳಿಸಿದ್ದರು. ಆ ವಿಚಾರದಲ್ಲಿ ಅವರು ರಾಷ್ಟ್ರದ್ರೋಹ ಪ್ರಕರಣ ಎದುರಿಸುತ್ತಿದ್ದರು. 2014ರಲ್ಲಿ ಅವರ ವಿರುದ್ಧ ದೋಷಾರೋಪಣೆ ಸಲ್ಲಿಸಲಾಗಿತ್ತು. 2019 ಡಿಸೆಂಬರ್ 17, ರಂದು ವಿಶೇಷ ನ್ಯಾಯಾಲಯವು ದೇಶದ್ರೋಹದ ಪ್ರಕರಣದಲ್ಲಿ ಮುಷರಫ್ ಅವರಿಗೆ ಮರಣದಂಡನೆ ವಿಧಿಸಿತು. ಆದರೆ, ಆರೋಗ್ಯ ಕಾರಣಗಳಿಗಾಗಿ 2016ರಲ್ಲಿ ಚಿಕಿತ್ಸೆಗೆಂದು ದುಬೈಗೆ ಹಾರಿದ್ದ ಅವರು ದೇಶಕ್ಕೆ ಮರಳಿರಲಿಲ್ಲ.

Continue Reading
Home
Videos
Shop
error: Content is protected !!