Connect with us

Jobs

ಝೂಮ್‌ನಿಂದ 1,300 ಉದ್ಯೋಗಿಗಳು ವಜಾ

Published

on

ನವದೆಹಲಿ: ವಿಡಿಯೊ ಕಾನ್ಫರೆನ್ಸಿಂಗ್ ವ್ಯವಸ್ಥೆಯಲ್ಲಿ ಸದ್ದು ಮಾಡಿದ್ದ ಝೂಮ್ ಈಗ 1,300 ಉದ್ಯೋಗ ಕಡಿತಗೊಳಿಸಲು ಯೋಜಿಸಿರುವುದಾಗಿ ಹೇಳಿದೆ.

ಕೋವಿಡ್ ಸಾಂಕ್ರಾಮಿಕದ ಕಾಲಘಟ್ಟದಲ್ಲಿ ಹೆಚ್ಚಿನ ಬೇಡಿಕೆ ಗಳಿಸಿದ್ದ ಝೂಮ್ ಬಳಿಕ ಆದಾಯದಲ್ಲಿ ಕುಸಿತ ಕಂಡಿದೆ ಎಂದು ಝೂಮ್ ವಿಡಿಯೊ ಕಮ್ಯೂನಿಕೇಷನ್ಸ್ ಕಂಪನಿ ಹೇಳಿದೆ.

ಈ ಹೆಜ್ಜೆಯು ಜಾಗತಿಕವಾಗಿ ಕಂಪನಿಯ ಶೇ 15ರಷ್ಟು ಉದ್ಯೋಗಿಗಳ ಮೇಲೆ ಪರಿಣಾಮ ಬೀರಲಿದೆ ಎಂದು ಸಿಇಒ ಎರಿಕ್ ಯುವಾನ್ ತಿಳಿಸಿದ್ದಾರೆ.

ಕಳೆದ ವರ್ಷ ಸಂಸ್ಥೆಯ ಷೇರುಗಳು ಶೇ 63ರಷ್ಟು ಕುಸಿತ ಕಂಡಿವೆ.

ಕೋವಿಡ್ ಲಾಕ್‌ಡೌನ್ ಕಾಲಘಟ್ಟದಲ್ಲಿ ಮನೆ ಮಾತಾಗಿದ್ದ ಜನಪ್ರಿಯ ಝೂಮ್ ಆ್ಯಪ್‌ನ ಬೆಳವಣಿಗೆ ಆ ನಂತರ ಕುಂಠಿತಗೊಂಡಿದೆ.

2021ರ ಹಣಕಾಸಿನ ಸಾಲಿನಲ್ಲಿ ಝೂಮ್ ಆದಾಯ ಒಂಬತ್ತು ಪಟ್ಟು ಹೆಚ್ಚಾಗಿತ್ತು. 2022ರಲ್ಲಿ ನಾಲ್ಕು ಪಟ್ಟು (ಶೇ 6.7) ಮಾತ್ರ ಹೆಚ್ಚಳಗೊಂಡಿತ್ತು. ಅಲ್ಲದೆ 2022ರಲ್ಲಿ ಲಾಭ ಶೇ 38ರಷ್ಟು ಕುಸಿದಿದೆ ಎಂದು ವಿಶ್ಲೇಷಕರು ತಿಳಿಸುತ್ತಾರೆ.

Continue Reading
Home
Videos
Shop
error: Content is protected !!