Jobs
400 ಕ್ಕೂ ಹೆಚ್ಚು ಹೊಸ ಉದ್ಯೋಗಿಗಳನ್ನು ವಜಾಗೊಳಿಸಿದ ವಿಪ್ರೋ ಕಂಪೆನಿ
ನವದೆಹಲಿ: ತರಬೇತಿಯ ನಂತರವೂ ಆಂತರಿಕ ಮೌಲ್ಯಮಾಪನದಲ್ಲಿ ಪದೇ ಪದೇ ಕಳಪೆ ಪ್ರದರ್ಶನ ನೀಡಿದ 400 ಕ್ಕೂ ಹೆಚ್ಚು ಹೊಸ ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ ಎಂದು ಐಟಿ ಸೇವೆಗಳನ್ನು ಒದಗಿಸುವ ಪ್ರಮುಖ ಕಂಪೆನಿ ವಿಪ್ರೋ ಹೇಳಿದೆ.
ಈ ಮೂಲಕ ಇತ್ತೀಚಿನ ವಾರಗಳಲ್ಲಿ ಸಿಬ್ಬಂದಿಗಳನ್ನು ಕಡಿಮೆಗೊಳಿಸಿರುವ ಗೂಗಲ್, ಅಮೆಝಾನ್ , ಸ್ವಿಗ್ಗಿಯ ಹೆಜ್ಜೆಯನ್ನು ಅನುಸರಿಸಿದೆ.
“ವಿಪ್ರೋದಲ್ಲಿ, ನಾವು ಅತ್ಯುನ್ನತ ಮಾನದಂಡಗಳನ್ನು ಹಿಡಿದಿಟ್ಟುಕೊಳ್ಳುವ ವಿಚಾರದಲ್ಲಿ ಹೆಮ್ಮೆಪಡುತ್ತೇವೆ. ಮಾನದಂಡಗಳಿಗೆ ಅನುಗುಣವಾಗಿ, ನಮಗಾಗಿ ನಾವು ಹೊಂದಿಸಿಕೊಳ್ಳುವ ಗುರಿಯನ್ನು ಹೊಂದಿದ್ದೇವೆ. ಪ್ರತಿಯೊಬ್ಬ ಪ್ರವೇಶ ಮಟ್ಟದ ಉದ್ಯೋಗಿಗಳು ತಮ್ಮ ಗೊತ್ತುಪಡಿಸಿದ ಕೆಲಸದ ಕ್ಷೇತ್ರದಲ್ಲಿ ಒಂದು ನಿರ್ದಿಷ್ಟ ಮಟ್ಟದ ಪ್ರಾವೀಣ್ಯತೆಯನ್ನು ಹೊಂದಿರಬೇಕೆಂದು ನಾವು ನಿರೀಕ್ಷಿಸುತ್ತೇವೆ. ತರಬೇತಿಯ ನಂತರವೂ ಮೌಲ್ಯಮಾಪನದಲ್ಲಿ ಪದೇ ಪದೇ ಕಳಪೆ ಪ್ರದರ್ಶನ ನೀಡಿದ 452 ಹೊಸ ಉದ್ಯೋಗಿಗಳನ್ನು ನಾವು ಕೈಬಿಟ್ಟಿದ್ದೇವೆ” ಕಂಪನಿಯು NDTV ಗೆ ಹೇಳಿಕೆಯಲ್ಲಿ ತಿಳಿಸಿದೆ.





