Connect with us

Special

“ಅಪ್ಪ” ಜೀವನದ ಶಕ್ತಿ, ಮಮತೆಯ ಮೂರ್ತಿ

Published

on

“ಅಪ್ಪ” ಈ ಶಬ್ದದಲ್ಲೇ ಅದೆಂಥ ಗತ್ತು ಗಾಂಭೀರ್ಯ, ಅಪ್ಪ ಅನ್ನು ಪದಕ್ಕೆ ಸಾವಿರ ಆನೆಗಳ ಬಲ ಹಾಗೆ ಅಪ್ಪ ನಮ್ಮ ಧೈರ್ಯ ಅಪ್ಪನ ಬಗ್ಗೆ ಅದೆಂತದ್ದೋ ಅಮೂತ೯  ಭಯ.
ಮಗುವಿನ ಬೆಳವಣಿಗೆ ಮತ್ತು ಬೆಳವಣಿಗೆಗೆ ಕೊಡುಗೆ ನೀಡುವುದು ತಂದೆಯ ಪಾತ್ರ. ತನ್ನ ಮಗುವಿಗೆ ಅಥವಾ ಮಕ್ಕಳಿಗೆ ಜೀವನದ ಯಾವುದೇ ಅಗತ್ಯತೆಗಳ ಕೊರತೆಯಾಗದಂತೆ ನೋಡಿಕೊಳ್ಳುವುದು ತಂದೆಯ ಪಾತ್ರ.

ಜೂನ್ 19, 1910 ರಂದು ಅಮೆರಿಕದ ವಾಷಿಂಗ್ಟನ್ ನಲ್ಲಿ ಮೊದಲ ಬಾರಿಗೆ ತಂದೆಯ ದಿನಾಚರಣೆಯನ್ನು ಆಚರಿಸಲಾಯಿತು, ತದನಂತರ ದಿನಗಳಲ್ಲಿ ಪ್ರತಿವರ್ಷ ಈ ದಿನವನ್ನು ಆಚರಿಸುತ್ತಾ ಬಂದಿದ್ದೇವೆ.

ತಂದೆಯಲ್ಲಿ ಪ್ರೀತಿ ಇಲ್ಲ ಎಂದುಕೊಂಡರೆ ತಪ್ಪು, ಆತನಲ್ಲಿ ಅತೀವ ಬಲವಿದೆ, ಆದರೆ ತಾಯಿ ಹಾಗೆ ಅದನ್ನು ತೋರಗೊಡಲಾರ. ಅಪ್ಪನ ಪ್ರೀತಿಯ ಅರ್ಥ ಆಗೋದು ಬಹಳಾನೇ ಕಷ್ಟ. ಅಪ್ಪ ಎಂದರೆ ನಮ್ಮೆಲ್ಲ ಕೋರಿಕೆಗಳ ಮ್ಯಾಜಿಕ್ ಬಾಕ್ಸ್! ಸಣ್ಣ ಸ್ಲೇಟಿನಿಂದ ಹಿಡಿದು ದೊಡ್ಡ ಕಾರಿನವರೆಗೆ ನಮ್ಮೆಲ್ಲ ಬಯಕೆಗಳನ್ನು ತನ್ನ ಶಕ್ತಿಯನುಸಾರ ತುಂಬಿದವನು. ಮಕ್ಕಳ ಪಾಲಿಗೆ ಅಪ್ಪನೇ ಮೊದಲ ಹೀರೋ, ತೋರು ಬೆರಳು ಹಿಡಿದು ಸಂತೆಯಲ್ಲಿ ಜಗತ್ತನ್ನೇ ತೋರಿದವ. ದಶಕಗಳ ಹಿಂದೆ ಅಪ್ಪ ಎಂದರೆ ಮಕ್ಕಳ ಮೊಗದಲ್ಲಿ ಮೂಡುತ್ತಿದ್ದ ಭಾವ ಭಯ, ಸಣ್ಣಪುಟ್ಟ ಕಾರಣಕ್ಕೂ ತಲೆಯ ಮೇಲೆ ಆಕಾಶವೇ ಕಳಚಿ ಬಿದ್ದಂತೆ ಭಾವಿಸಿ, ಕೂಗಾಡಿ  ದನಕ್ಕೆ ಬಡಿದ ಹಾಗೆ ಬಡೆಯುತ್ತಿದ್ದ ಆತನಕ್ಕೋ ಪಕ್ಕೆ ಆತನೇ ಸಾಟಿ, ಅದಕ್ಕೆ ಏನು ಎಲ್ಲಾ ಮಕ್ಕಳ ಡಿಮ್ಯಾಂಡ್ ಗಳು ಮೊದಲು ತಾಯಿಯ ಬಳಿಯೇ. ಏನನ್ನೇ ಕೇಳಬೇಕಾದರೂ ಅದಕ್ಕೆ ಅಮ್ಮನ ಮಧ್ಯಸ್ಥಿಕೆ ಬೇಕೇ ಬೇಕು. ಅಪ್ಪನ ಮುಂದೆ ಧೈರ್ಯವಾಗಿ ಹೋಗಿ ಕೇಳುವ ಧೈರ್ಯ ಇಲ್ಲವೇ ಇಲ್ಲ, ಹಾಗಿದ್ದಾಗ ಎದುರು ನಿಂತು ಮಾತನಾಡುವ ಪ್ರಶ್ನೆ ಇಲ್ಲವೇ ಇಲ್ಲ! ಹಾಗೆಂದು ಆತ ಸರ್ವಾಧಿಕಾರಿಯಲ್ಲ ಬದಲಿಗೆ ಸರಿ ತಪ್ಪುಗಳನ್ನು ತಿದ್ದುವ ಮಾರ್ಗದರ್ಶಕ ಆದರೆ ಕಾಲ ಬದಲಾದಂತೆ ಅಪ್ಪನು ಸಹ ಬದಲಾಗುತ್ತಿದ್ದಾನೆ. ಅಂದಿನ ಅಪ್ಪ ನಲ್ಲಿದ್ದ ದರ್ಪ ಕೋಪ….. ಅನುಮಾನ  ಇಂದಿನ ಅಪ್ಪಂದಿರಲಿಲ್ಲ….. ಕುಂಚ ಕುಂಚವಾಗಿ ಕಡಿಮೆಯಾಗುತ್ತಿದೆ, ಅಪ್ಪ ಎಂದರೆ ಈಗಿನ ಮಕ್ಕಳಲ್ಲಿ ಭಯದ ಬದಲು ಮಂದಹಾಸ ಮೂಡುತ್ತದೆ . ಈಗಿನ ಅಪ್ಪ ಮಕ್ಕಳನ್ನು ಅನುಮಾನದಿಂದ ನೋಡಲ್ಲ ಬದಲಿಗೆ ಅಭಿಮಾನದಿಂದ ಕಾಣುತ್ತಾನೆ, ಅವರ ಬಯಕೆಗಳಿಗೆ ಸಮಸ್ಯೆಗಳಿಗೆ ಕಿವಿಯಾಗುತ್ತಾನೆ….. ಅವರ ಕೋರಿಕೆಗಳ ಇಂದಿನ ಅವಶ್ಯಕತೆಗಳನ್ನು ಅರಿಯಲು ಮನಸ್ಸು ಮಾಡುತ್ತಿದ್ದಾನೆ. ಇಂದಲ್ಲ ತನ್ನ ಇಚ್ಛೆಗನಸುರವಾಗಿ ಮಕ್ಕಳು ಬೆಳೆಯಬೇಕು ಎಂದು ಬಯಸುತ್ತಿದ್ದ ಅಪ್ಪ, ಈಗ ಮಕ್ಕಳ ಓದಿನ, ಆಟದ, ಸ್ನೇಹಿತರ ಅಷ್ಟೇ ಏಕೆ ಸಂಗಾತಿ ಆಯ್ಕೆಯ ವಿಷಯದಲ್ಲೂ ಸ್ವಾತಂತ್ರ್ಯ ನೀಡಿದ್ದಾನೆ! ಮಕ್ಕಳ ಮನಸ್ಸನ್ನು ಅರಿತಿದ್ದಾನೆ….. ಅಪ್ಪ ಮಕ್ಕಳ ಅಂತರ ಕಡಿಮೆಯಾಗುತ್ತಿದೆ.

ಹಿoದಲ್ಲ  ವರ್ಷಕ್ಕೋ ಆರು ತಿಂಗಳಿಗೂ ನಡೆಯುವ ಸಂತೆ ಜಾತ್ರೆಗೆ ಮಕ್ಕಳನ್ನು ಕರೆದುಕೊಂಡು ಹೋದರೆ ಎಲ್ಲಿಲ್ಲದ ಸಂತೋಷ ವರ್ಷಕೊಮ್ಮೆ ಬರುವ ಜಾತ್ರೆಗೆ ಹೋಗಲು ಜಾತಕ ಪಕ್ಷಿಗಳಂತೆ ಕಾಯುತ್ತಿರಬೇಕಾಗಿತ್ತು. ಆದ್ರೆ ಇಂದು ವೀಕೆಂಡ್ ಬಂತು ಅಂದರೆ ಸಾಕು ಮಾಲ್ ಸಿನಿಮಾ ಅಂತ ಮಕ್ಕಳು ಅಪ್ಪನ ಜೊತೆಗೆ ಹೋಗ್ತಾರೆ, ಮಕ್ಕಳ ಮನಸ್ಸಿನಲ್ಲಿ ಈಗಿನ ಅಪ್ಪ ಎವರೆಸ್ಟಿಗೂ ಎತ್ತರವಾಗಿದ್ದಾನೆ.

ಪ್ರತಿಯೊಬ್ಬರ ಜೀವನದಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದನ್ನು ನಮಗೆ ಕಲಿಸುವ ಮೊದಲು ಶಿಕ್ಷಕ ತಂದೆ ನಡವಳಿಕೆ ಮತ್ತು ನೀತಿ ಶಾಸ್ತ್ರದ ಬಗ್ಗೆ ಅವರೇ ನಮಗೆ ಕಲಿಸುತ್ತಾರೆ. ನಮ್ಮ ಜೀವನದಲ್ಲಿ ತಂದೆ ನಮ್ಮ ಮಾರ್ಗದರ್ಶನ ನೀಡುತ್ತಾರೆ, ಇದರಿಂದ ನಾವು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ.  ಅಪ್ಪ ಮಗುವಿನ ಬೆಂಬಲವಾಗಿ ಸದಾ ಯಾವಾಗಲೂ ಜೊತೆಯಾಗಿ ಇರುತ್ತಾನೆ, ಪ್ರತಿಯೊಂದು ರೀತಿಯ ಸಮಸ್ಯೆಗೆ ಪರಿಹಾರದೊಂದಿಗೆ ಸಿದ್ದನಾಗಿರುತ್ತಾನೆ, ಅವರು ನಮ್ಮ ಎಲ್ಲಾ ಅಗತ್ಯಗಳನ್ನು ನೋಡಿಕೊಳ್ಳುತ್ತಾರೆ ಮತ್ತು ನಮ್ಮ ಜೀವನದುದ್ದಕ್ಕೂ  ನಮ್ಮನ್ನು ಪ್ರೋತ್ಸಾಹಿಸುತ್ತಾರೆ. ತಂದೆಯು ಕುಟುಂಬದ ಶಕ್ತಿಯ ಸ್ತಂಭವಾಗಿದ್ದು ಜೀವನದ ಎಲ್ಲಾ ಸಂತೋಷದ ಮತ್ತು ಸವಾಲಿನ ಕ್ಷಣಗಳಲ್ಲಿ ಬಂದವನ್ನು ಬಲವಾಗಿರಿಸುತ್ತದೆ.
ಅಪ್ಪ ಬರಿ ಅಪ್ಪ ನಾಗಿಯೇ ಉಳಿಯದೆ ಸ್ನೇಹಿತನಾಗಿ ಹಿತೈಷಿಯಾಗಿ ಬೆಳೆದಿದ್ದಾನೆ, ಇಷ್ಟು ಮನೆಗಳಲ್ಲಿ ಅಪ್ಪ ಅಮ್ಮನ ಸ್ಥಾನ ತುಂಬುತ್ತಾನೆ ಇಂದಿನ ಬಹುತೇಕ ಮಕ್ಕಳಿಗೆ ಅಪ್ಪನ ಕೈನ ಛಡಿಯೇಟು ತಿಂದ ಅನುಭವಿಲ್ಲ, ಅಪ್ಪ ಒಬ್ಬ ಫ್ರೆಂಡ್ ಎಲ್ಲಾ ರೀತಿಯ ವಿಷಯಗಳನ್ನು ಶೇರ್ ಮಾಡಿಕೊಳ್ಳಬಲ್ಲ ಗೆಳೆಯ ಮಕ್ಕಳಿಗೆ ಅಪ್ಪನ ಬಗ್ಗೆ ಭಯವಿಲ್ಲ ಬದಲಾಗುತ್ತಿರುವ ಕಾಲಮಾನಕ್ಕೆ ತಕ್ಕಂತೆ ಅಪ್ಪ ಕೂಡ ಬದಲಾಗಿದ್ದಾನೆ, ಬದಲಾಗುತ್ತಿದ್ದಾನೆ…….

✍️ ಈರಮಂಡ ಹರಿಣಿ ವಿಜಯ
      ಕೊಡಂಬೂರ್, ಮೂರ್ನಾಡ್

Continue Reading
Home
Videos
Shop
error: Content is protected !!